Contact Angle Touch Studio for your Blog Design. Visit Site

ಮತ್ತೆ ಎಚ್ಚೆತ್ತರೆ...

 


ನಾನು ಸ್ವಂತಿಕೆಯ ಲೇಖನ ಬರೆಯುವುದನ್ನು ನಿಲ್ಲಿಸಿ, ಈಗ ಮತ್ತೆ ಅದ್ಯಾಕೋ ಬರೆಯಬೇಕು ಅಂತ ಅನ್ನಿಸುವುದರ ಮದ್ಯೆ 'ನಾನು ಸಾಕಷ್ಟು ಬದಲಾಗಿದ್ದೇನೆ' ಎನ್ನುವುದು ಅನುಭವಕ್ಕೆ ಬರುತ್ತಿದೆ. ವಿಷಯ ಸಂಬಂಧಿತವಾಗಿ ವಿಶ್ಲೇಷಣೆಯ ರೂಪದಲ್ಲಿ ಅಥವಾ ವಿಮರ್ಶೆಯ ರೂಪದಲ್ಲಿ ಲೇಖನ ಬರೆಯುವುದು ಹವ್ಯಾಸ ಆಗಿದ್ದ ಆ ಸಮಯದಿಂದ ಪ್ರತಿಯೊಂದು ವಿಷಯವನ್ನೂ careless ಆಗಿ ಕಾಣುವ ಈ ಸಮಯದವರೆಗೆ ಅದೆಷ್ಟೋ ಹೊಸ ಅನುಭವ - ವ್ಯಕ್ತಿ - ತಿಳುವಳಿಕೆಯ ಮೂಲಕ ನಡೆದು ಬಂದಿದ್ದೇನೆ ಎನ್ನುವುದನ್ನು ಅವಲೋಕಿಸಿದರೆ ಒಂದು ದೀರ್ಘ ಶ್ವಾಸ ಹೊರಹೊಮ್ಮುತ್ತದೆ.

ಯಾರು ನೋಡದಿದ್ದರೆ ಏನಂತೆ ಮುಂದೊಮ್ಮೆ ನನ್ನನ್ನು ನಾನು ಅವಲೋಕಿಸಲು, ನನ್ನ ಈ ಮಾತೃಭಾಷೆಯ ಲೇಖನಗಳು ಸಾತ್ ನೀಡಬಹುದು ಎನ್ನುವ ಅದ್ಯಾವುದೋ ಆಶಾಭಾವ ಮನಸ್ಸಿನಲ್ಲಿ ಚಿಗುರುತ್ತಿದೆ. ಬರೆಯುತ್ತೇನೆ.... ಅನುಭವಗಳನ್ನು ತಿಳುವಳಿಕೆಗಳಾಗಿ ಮನಸ್ಸಿನಲ್ಲಿ ಅಚ್ಚೊತ್ತಲು ಎಲ್ಲವನ್ನೂ  ಬರೆಯುತ್ತೇನೆ..... ಮಾಹಿತಿಗಳನ್ನು ಮುನ್ನೆಚ್ಚರಿಕೆಗಳಂತೆ ಗಂಭೀರವಾಗಿ ಪರಿಗಣಿಸಲು ಪ್ರತಿಯೊಂದನ್ನೂ ಬರೆಯುತ್ತೇನೆ...

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

Post a Comment

© ರಸ ಮಥನ. All rights reserved. Distributed by ASThemesWorld