Contact Angle Touch Studio for your Blog Design. Visit Site

ಬಾ ಹೋಗುವ.‌‌.....

ಯಾಕೊ ನಾವು, ಬಯಸಿದಂತೆ, ಇಲ್ಲ ನಿತ್ಯ ನೂತನ

ದಿನವುದಿನವು, ಒತ್ತಡದ ಈ, ಬಿಡುವಿಲ್ಲದ ಸಾಧನ


ಮನದ ಬಯಕೆ‌, ಕನವರಿಸುತ, ತುಂಬಿ ಕೊಡವು ತುಳುಕಲು

ಈಡೇರದೆ, ತುದಿಮುಟ್ಟದೆ, ನಿರೀಕ್ಷೆ ಬದಿಗೆ ಸರಿಯಲು


ಮತ್ತೆ ಮತ್ತೆ, ಒತ್ತು ಕೊಟ್ಟು, ಸರಿದೂಗುವ ಯತ್ನವು

ದೇವ ಬರೆದ, ನಕ್ಷೆಯಂತೆ, ಬೆಳೆವ ಹೊಸತು ಕುಸುಮವು


ದಾಟಬೇಕು, ನಿತ್ಯ ಬೇಲಿ, ಆಚೆ ಹೊರಗೆ ಚಾರಣ

ನಡೆಯಬೇಕು, ಜಾಲಮೀರಿ, ಹುಡುಕಿ ಹೊಸ ಕಾರಣ


ನೀರು ಸವಿದು, ಗಾಳಿ‌ ಹೀರಿ, ಹಸಿರು ವನಕೆ ಆದ್ಯತೆ

ಆಸೆ ಮರೆತು, ನಿರೀಕ್ಷೆ ತೊರೆದು, ನೆಮ್ಮದಿಗೆ ಈ ಸಿದ್ದತೆ


ಮನುಜ ಸೃಷ್ಟಿ, ಕೃತಕಲೋಕ, ಶೋಕಿಗಾಗಿ ಜೀವನ

ಸರಳ ಬದುಕು, ಮುಗ್ಧ ನಗು, ಬೆಲೆ ಇಲ್ಲದ ಭಾವನ


ಯಾಕೆ ಬೇಕು, ಭಿಕ್ಷೆ ಬದುಕು, ಹೊಗು ಸೀದ ಸ್ಮಶಾನ

ಮಗುವಿನಿಂದ, ತಲೆಹಣ್ಣಿಗೂ, ಸಾವು ಒಂದು ಸಮಾನ


ಚಿಂತೆ ಮರೆತು, ನಗುತ ಸಾಗು, ಬರೆದ ಬದುಕು ಒಪ್ಪಿಕೋ

ಯಾರೂ ಇಲ್ಲಿ, ನನ್ನವರಲ್ಲ, ಜೊತೆಗೆ ಬಂದರೆ ಅಪ್ಪಿಕೊ

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

2 comments

  1. ಸೂಪರ್...
    1. Thank you
© ರಸ ಮಥನ. All rights reserved. Distributed by ASThemesWorld