ಕವಿಯು ಕೂಗಿ ಕರೆದನೋ
ಕಾಡು ಬಳಿಗೆ ಸೆಳೆಯಿತೋ,
ಕಿಸೆಯು ಖಾಲಿ ಆಗಿರಲು
ಕೀಲಿ ತಿರುಗಿಸಿ ಹೊರಡಲು,
ಕುಳಿತು ಬೈಕಿನ ಮೇಲೆ ಹಾಗೆ
ಕೂರಿಸಿ ಕನಸನೂ ಜೊತೆಗೆ,
ಕೃತಕ ಲೋಕದಾ ನಿತ್ರಾಣ
ಕೆಲಕಾಲದ ಬಿಡುವು ಪಯಣ,
ಕೇಳಿದೊಂದು ಆಸೆಗೆ
ಕೈಯ ಹಿಡಿದು ಕಾಡಿಗೆ,
ಕೊಟ್ಟ ಮಾತನು ಉಳಿಸಿ
ಕೋತಿ ಆನೆಗಳ ತೋರಿಸಿ,
ಕೌತುಕ ಕಣ್ಣುಗಳನು ಸರಿಸಿ
ಕಂದನಿಗೆ ಸವಿ ನೋಟ ಉಣಿಸಿ,
ಕಃತ್ತಲಾಗುವ ಮೊದಲು ಮನೆಯ ಕಡೆ ಹೆಜ್ಜೆ.