ಕನಸು ಕಂಗಳ ತನುವಿಗೆ ಮಳೆಹನಿಯ ಸ್ಪರ್ಶ
ಕಣ್ಣು ಆಗಸದಾಚೆ ಎತ್ತಿ ನೋಡುವ ಹರ್ಷ
ಮನೆ ಮಾಡು ಸೋರುವುದು ಸರಿಮಾಡೊ ಕಷ್ಟ
ಒಣಗಿಸಿದ ಸೆಂಡಿಗೆಯ ಒಳತರುವ ಓಟ
ಹಲಸು ಸೋಟೆಗೆ ಅಮ್ಮನ ಒಪ್ಪಿಸುವ ಕೆಲಸ
ಅಜ್ಜಿಕತೆಯನು ಬಯಸಿ ಆಚೀಚೆ ಅಲೆದಾಟ
ಮಳೆನೀರು ಎಲೆಗುರುಳಿ ನೆಲಕೆ ಧುಮುಕಿ
ನೆಲದ ಗಂಧವ ಕೆದಕಿ ಎಲ್ಲೆಡೆಗೆ ಹರಡಿ
ಹರಿವ ಕವಲುಗಳು ತೋಡಾಗಿ ಯಾನ
ಪಯಸ್ವಿನಿಯು ತಾ ಉಕ್ಕಿ ಹರಿವುದನು ನೋಡ
[Photo Credit:- Google]