ಹಸಿರೇ ಉಸಿರಿನ ತವರು
ಹಸಿರಿಗೆ ಉಸಿರು ನೀರು.
ಸಾಲುಗಳ ಎರಡರ ಮುಖೇನ ಮಾನವನ ಉಸಿರಿಗೂ ಭೂಮಿಯ ಹಸಿರಿಗೂ ನೀರಿಗೂ ಹೊಂದಿರುವ ಅವಿನಾಭಾವ ಸಂಬಂಧವನ್ನು ಬಿಂಬಿಸಿದ ಅಜ್ಞಾತಕವಿಗೆ ನಮಿಸಬೇಕು.
ನೀರು ಬಾಯಿ ಚಪ್ಪರಿಕೆಗೆ ದಾಹ ನೀಗಿಸುವಿಕೆಗೆ ಜೀವದ ಮೂಲ. ಮಾನವ ಬುದ್ಧಿ ಜೀವಿಯಾದರೂ ಅವನಿಗೆ ವಿದ್ಯುತ್ ನೀಡುವ ಮೂಲಕ ಶಕ್ತಿ ನೀಡಲು ಸಾಧ್ಯವಿಲ್ಲ. ಜೀವದ ತುಡಿತಕ್ಕೆ ಸಾಧನೆಯ ಹೆಜ್ಜೆಗೆ ಉತ್ಸಾಹದ ಚಟುವಟಿಕೆಗೆ ನೀರು ಅವಶ್ಯಕ. ಭೂಮಿ ಎಂಬ ವಿಸ್ತಾರತೆಗೆ ಹೊಂದಿಕೊಂಡು ಬದುಕಬೇಕಾದ ಮಾನವ ಭೂಮಿಯನ್ನು ತನ್ನ ಅವಶ್ಯಕತೆಗೆ ಬದಲಿಸಿದ್ದು ವಿಪರ್ಯಾಸ. ಬದುಕು ಬದುಕಗೊಡು ಇದು ಯಾವಾಗ ಮಾನವನಿಗೆ ಮನದಟ್ಟಾಗುವುದೋ ಆಗ ಮಾತ್ರ ನೀರಿನ, ಜೀವದ ಬೆಲೆ ಆತನು ತಿಳಿಯುತ್ತಾನೆ.
ಜಲಸಂರಕ್ಷಣೆ ಇದು ಇಂದು ಅಥವಾ ನಿನ್ನೆಯ ಸೂಚನೆಯಲ್ಲ ಯಾವಾಗ ಮಾನವ ಆಧುನಿಕತೆಯ ಬೆನ್ನು ಹಿಡಿದು ವೈಜ್ಞಾನಿಕ ಸವಾರಿ ಆರಂಭಿಸಿದನೋ ಅಂದಿನಿಂದ ಬೆನ್ನಟ್ಟಿ ಬೆದರಿಸುವ ಸಮಸ್ಯೆ. ಜಲ ಸಂರಕ್ಷಣೆ ಎಂದರೆ, ನೀರನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೂ ಉಳಿಸುವ ಹಾಗೂ ಸದುಪಯೋಗಪಡಿಸುವ ಕಾರ್ಯಗಳು. ಇನ್ನೊಂದರ್ಥದಲ್ಲಿ ಜಲಸಂರಕ್ಷಣೆ ಎನ್ನುವುದರ ಮುಖೇನ ಮಾನವ ಸೇರಿದಂತೆ ಜೀವ ತುಂಬಿದ ಈ ಸಂಕುಲದ ಶಕ್ತಿವರ್ಧಕ ಇಂಧನದ ಸಂರಕ್ಷಣೆ ಎಂದು ತಿಳಿಯಬಹುದು. ಜಲ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆಯನ್ನು ಆಧುನೀಕರಣ ತಂದೊಡ್ಡಿದೆ. ವರ್ತುಲ ಚಲನೆ ಯಂತೆ ಭೂಮಿ ಆಕಾಶ ತಿರುಗುವ ನೀರಿನ ಅವಶ್ಯಕತೆ ಮಾನವನಿಗೆ ಹೆಚ್ಚು. ಜೀವ ಜಲದ ಮೂಲಗಳಾದ ಕೆರೆ ಬಾವಿ ಸರೋವರಗಳ ಸಮರ್ಪಕವಾದ ಬಳಕೆ ಆದಲ್ಲಿ ಮಾತ್ರ ಮಾನವನಿಗೂ ಭೂಮಿಯ ಹಸಿರು ನಿಲುವು ಎಂಬುದು ಸುಳ್ಳಲ್ಲ.
ಜಲ ಸಂರಕ್ಷಣೆ ಹೇಗೆ ಈ ಪ್ರಶ್ನೆಗೆ ಎರಡು ಅಥವಾ ಮೂರು ವಿಧದಲ್ಲಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗಬಹುದು. ಜಲ ಸಂರಕ್ಷಣೆ ಆಗಲು ನೀರಿನ ನಿರ್ವಹಣೆಯ ಮೂಲಕ ಅಥವಾ ಮಳೆ ನೀರು ಕೊಯ್ಲು ಮಾಡುವುದರ ಮೂಲಕ ಅಥವಾ ಆಧುನೀಕರಣದ ಸಮರ್ಪಕವಾದ ಬಳಕೆಯ ಮೂಲಕ ಶ್ರಮಿಸಬಹುದು. ನೀರಿನ ನಿರ್ವಹಣೆ ಎಂದರೆ ಇರುವ ನೀರನ್ನು ಮಾಡದೆ ಸುರಕ್ಷಿತವಾಗಿ ಬಳಸುವ ಮಾರ್ಗಗಳನ್ನು ಕಂಡುಕೊಳ್ಳುವುದು, ಕಾರ್ಖಾನೆಗಳಲ್ಲಿ ಅಥವಾ ಇನ್ನಿತರ ಹೇರಳವಾಗಿ ನೀರನ್ನು ಬಳಸುವ ಸ್ಥಳಗಳಲ್ಲಿ ಪೋಲಾಗುವ ನೀರನ್ನು ಶುದ್ಧೀಕರಣ ಕ್ರಿಯೆಯ ಮೂಲಕ ಇಂಗಿಸುವ ಕ್ರಮವನ್ನು ಕೈಗೊಳ್ಳುವುದು. ಮಳೆ ನೀರು ಕೊಯ್ಲು ಎನ್ನುವುದರ ಮುಖೇನ ಮಳೆಗಾಲದಲ್ಲಿ ಭೂಮಿಯನ್ನು ಸೇರುವ ಮಳೆಹನಿಗಳನ್ನು ಸರಿಯಾದ ರೀತಿಯಲ್ಲಿ ಶುದ್ಧೀಕರಣ ಕ್ರಿಯೆಗೆ ಒಳಪಡಿಸಿದ ನಂತರ ಮಾಡಿ ಶೇಖರಣೆ ಮಾಡುವುದು ಅಥವಾ ಭೂಮಿಯಲ್ಲಿ ಇಂಗಿಸಿ ಜೀವಜಲವನ್ನು ಒದಗಿಸುವುದು. ಆಧುನಿಕ ತಂತ್ರಜ್ಞಾನವನ್ನು ಬಳಸುವುದು ಎಂದರೆ ಉಪ್ಪು ನೀರನ್ನು ಶುದ್ಧನೀರಾಗಿಸುವಂತೆ ಯಂತ್ರಗಳನ್ನು ಬಳಸಿ ಇನ್ನಷ್ಟು ನೀರನ್ನು ಒದಗಿಸುವ ಕಾರ್ಯಗಳನ್ನು ಮಾಡುವುದು.
ಜಲಸಂರಕ್ಷಣೆ ಯಾಕೆ ಎನ್ನುವ ಪ್ರಶ್ನೆ.. ಇದು ಆಧುನಿಕ ಯುಗದಲ್ಲಿ ಯುವ ಜನತೆಯನ್ನು ಕಾಡುವ ಪ್ರಶ್ನೆ. ಜಂಜಾಟದ ಜೀವನದ ಮಧ್ಯೆ ಜಲಸಂರಕ್ಷಣೆ ಯಾಕೆ ಎನ್ನುವುದು ಅವರ ವಾದ. ಸರ್ವೆ ಒಂದರ ಪ್ರಕಾರ ಅಂತರ್ಜಲದಲ್ಲಿನ 89% ನೀರು ಹೊರ ತೆಗೆಯಲು ಸಾಧ್ಯವಿಲ್ಲ. ಹೊರತೆಗೆದ ನೀರಿನಲ್ಲಿ ಎಲ್ಲಾ ಅವಶ್ಯಕತೆಗಳನ್ನು ನೀಗಿಸಿ ಬೇಕಿದೆ. ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಜನತೆಯೇ ನೀರನ್ನು ಹೆಚ್ಚಾಗಿ ಬಳಸುತ್ತಾರೆ. ನಗರ ಜೀವನದ ನೀರಿನ ಅವಶ್ಯಕತೆಯ 50% ನೀರನ್ನು ಅಂತರ್ಜಲ ನೀಗಿಸುತ್ತದೆ. ಗ್ರಾಮೀಣ ಪ್ರದೇಶದ ಜನರ ನೀರಿನ ಅವಶ್ಯಕತೆ 85% ನೀರನ್ನು ಅಂತರ್ಜಲ ಒದಗಿಸುತ್ತದೆ. 2007 - 2017 ವರ್ಷಗಳ ಮಂದಿರಿ 61% ನೀರು ಇದಕ್ಕಾಗಿ ಮುಗಿದುಹೋಗಿದೆ ಎಂಬುದು ಕೇಂದ್ರ ಅಂತರ್ಜಲ ಮಂಡಳಿ CGWB ವರದಿಯಾಗಿದೆ.ಪರಿಹಾರ ಕಾಣಬೇಕಾದದ್ದು ಇಂದಿನ ಜನತೆಗೆ ಮಾತ್ರವಲ್ಲದೆ ಭವಿಷ್ಯಕ್ಕೂ ಪ್ರಾಮುಖ್ಯ ವೆನಿಸುತ್ತದೆ.ಹೇರಳವಾದ ಮಳೆ ಬಂದರೂ ಜಲಕ್ಷಾಮವನ್ನು ಬೇಸಿಗೆ ಬಂದೊಡನೆ ಎದುರಿಸುವ ಊರುಗಳಿವೆ. ಇಂತಹ ಪ್ರದೇಶಗಳಲ್ಲಿ ಜಲಸಂರಕ್ಷಣೆಯ ಅನಿವಾರ್ಯತೆಯನ್ನು ಜನರು ಮನಗಾಣಬೇಕಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಅಂತರ್ಜಲದ ಸಮರ್ಪಕವಾದ ಬಳಕೆ ಎನ್ನುವುದು ಮಾನವನಿಗೆ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ ಎಂದೆನಿಸುತ್ತದೆ. "We forget that the water cycle and the human cycle are same" ಎಂಬ ಇಂಗ್ಲಿಷ್ ಯುಕ್ತಿ ಅಂತೆ ಮಾನವ ಹಾಗೂ ನೀರಿನ ಕೊಂಡಿ ಬಿಗಿಯಾಗಿದೆ. ಇನ್ನಾದರೂ ತನ್ನ ಭ್ರಮೆಯ ಲೋಕದಿಂದ ಹೊರಬಂದು ಮಾನವ ಜಲಸಂರಕ್ಷಣೆಯ ಬಗ್ಗೆ ಸ್ವಲ್ಪ ಯೋಚಿಸಿದರೆ ಮುಂದಿನ ಜನಾಂಗಕ್ಕೆ ಲಾಭವಾದೀತು. ಆದಷ್ಟು ಬೇಗ ವಾದರೆ ಎಲ್ಲರಿಗೂ ಒಳ್ಳೆಯದು...