Contact Angle Touch Studio for your Blog Design. Visit Site

ಪ್ರೇಮ ವಿಕಾಸ, ಸ್ವಾರ್ಥ ಸಂಕೋಚ

3 min read
 
ಸ್ವಾರ್ಥಿಗಳ ಸಂತೆಯಲ್ಲಿ
ಮೋಸ ವಂಚನೆಗಳಿಗೆ ಮಿತಿ ಇಲ್ಲ.
ಸ್ನೇಹ ಪ್ರೀತಿಗಳಿಗಂತೂ ಬೆಲೆಯಿಲ್ಲ.
 ಈ ರೀತಿ ನಿರಾಶಾವಾದಿಗಳಾದ ಕವಿಗಳು ಹೇಳುವುದು ಇದುವೇ ಸ್ವಾರ್ಥ ಮಿತಿ ಮೀರದಿರಲಿ ಪ್ರೀತಿ ತಿನಾಗೇ ಉದಯಿಸೀತು'. ಸ್ವಾಮಿ ವಿವೇಕಾನಂದರ "ಪ್ರೇಮವೆಲ್ಲ ವಿಕಾಸನ ಸ್ವಾರ್ಥವೆಲ್ಲ ಸಂಕೋಚನ" ಎಂಬ ಮಾತು ಮಹತ್ವಪೂರ್ಣವಾದ ಅಥವಾ ಜೀವನದ ಮೇಲೆ ಅತ್ಯಂತ ಹೆಚ್ಚು ಪ್ರಭಾವವನ್ನು ಬೀರುವ ಒಂದು ವಿಷಯ.
ಈ ವಿಷಯವನ್ನು ಕೇಳಿದ ಕ್ಷಣ ನೆನಪಿಗೆ ಬರುವಂತಹದ್ದು ಒಂದು ಕಥೆ. ಯಾವುದೋ ಅಧ್ಯಾಪಕರು, ಯಾವುದೋ ಒಂದು ವಿಷಯವನ್ನು ವಿವರಿಸುವಾಗ ಉದಾಹರಣೆಯಾಗಿ ನೀಡಿದ ಕಥೆ. ಒಂದು ಊರಿನಲ್ಲಿ ಒಬ್ಬ ಸಂತುಷ್ಟ ರಾಜನಿದ್ದನಂತೆ. ತನ್ನ ಪ್ರಜೆಗಳನ್ನು ಸಂತೋಷದಿಂದ ನೋಡಿಕೊಳ್ಳುತ್ತಾ, ಯಾವುದೇ ಚಿಂತೆ ವ್ಯಥೆಗಳಿಲ್ಲದೆ ಕಷ್ಟ-ನಷ್ಟಗಳಿಲ್ಲದೆ ಸಂತೋಷದ ಜೀವನವನ್ನು ಸಾಗಿಸುತ್ತ ಇದ್ದಂತಹ ರಾಜ. ಆತನ ಏಕೆಕ ಮಗಳನ್ನು ಆತ ಹೆಚ್ಚು ಪ್ರೀತಿಸುತ್ತಿದ್ದನಾದ್ದರಿಂದ ಅವಳಿಗೆ "ಪ್ರೀತಿ" ಎಂದು ನಾಮಕರಣ ಮಾಡಿದ್ದ. ಪ್ರೀತಿಯ ಒಂದೇ ಒಂದು ಋಣಾತ್ಮಕ ವಿಷಯ ಎಂದರೆ ಆಕೆ ಯಾರನ್ನು ಪ್ರೀತಿಸುತ್ತಿರಲಿಲ್ಲ ಯಾರನ್ನು ಕಂಡರೂ "I hate you, I hate you" ಎನ್ನುತ್ತಿದ್ದಳು.ಒಂದು ಸಲ ಒಬ್ಬ ಜ್ಞಾನಿಯು ರಾಜನ ವಿನಂತಿಯ ಮೇರೆಗೆ ಆಕೆಯನ್ನು ಸರಿಪಡಿಸಲು, ಒಂದು ಎತ್ತರವಾದ ಬೆಟ್ಟದ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋದ. ಅಲ್ಲಿ ನಾಲ್ಕು ಭಾಗದಲ್ಲಿ ಎತ್ತರವಾದ ಅಂತಹ ಬೃಹದಾಕಾರದ ಕಲ್ಲುಗಳಿದ್ದವು.ಆಕೆಯಲ್ಲಿ "ನಿನಗೆ ಇಷ್ಟವಿರುವ ಯಾವುದಾದರೂ ವಾಕ್ಯ ಹೇಳು" ಎಂಬ ಹಾಗೆ ಆತ ಕೇಳಿಕೊಂಡಾಗ, ಆಕೆಯು "I hate you" ಎಂದಳು. ಆಕೆಯ ಮಾತು ಮಾರ್ದನಿಸಿ 4 ಕಲ್ಲುಗಳಿಗೆ ಬಡಿದು ಮತ್ತೆ ಮತ್ತೆ ಆಕೆಯಲ್ಲಿ "I hate you, I hate you"ಎಂದಿತು... ಯಾಕೆ ಚಿಂತಾಕ್ರಾಂತರಾದರು ಹೆದರಿದಳು ಬೇಸರಗೊಂಡಳು.ಆಗ ಜ್ಞಾನಿಯು "ಈಗ I love you ಎಂದು ಹೇಳು" ಎಂದನು. ಆಕೆ ಹೇಳಿದಾಗ ಮತ್ತೆ ಮತ್ತೆ "I love You,I love You" ಎಂದು ಕೇಳಿತು. ಆಗ ಮತ್ತೆ ಆಕೆ ಸಂತೋಷಗೊಂಡಳು.
ಇದರಿಂದ ತಿಳಿಯಬಹುದಾದ ಸಾರಾಂಶ ಏನು ಎಂದು ಕೇಳಿದರೆ. ಯಾವಾಗ ನಾವು ಪ್ರೀತಿಯನ್ನು ಹಂಚಲು ಅಥವಾ ಪ್ರೀತಿಯನ್ನು ಪಸರಿಸುವ ಕಾರ್ಯವನ್ನು ನಮ್ಮ ಹವ್ಯಾಸವಾಗಿ ಮಾಡಿಕೊಳ್ಳುತ್ತೇವೆಯೋ ಆಗ ನಮಗೆ ಪ್ರೀತಿ ಹಾಗೂ ಒಲುಮೆಯನ್ನು ಸಾಧಿಸಲು ಸಾಧ್ಯ. ನಾವು ಸ್ವಾರ್ಥಿಗಳಾದಂತೆ ನಮ್ಮನ್ನು ಏಕಾಂಗಿಗಳನ್ನಾಗಿ ಮಾಡುವ ಜನತೆ, ಕೊನೆಗೆ ನಮ್ಮ ವೈರಿಗಳಾಗಿಬಿಡುತ್ತಾರೆ. ಯಾಕೆಂದರೆ ಅವರಿಗೆ ನಮ್ಮಿಂದ ಏನೂ ಆಗಬೇಕಾಗಿಲ್ಲ. ಸ್ವಾಮಿ ವಿವೇಕಾನಂದರು ಇದನ್ನೇ ಹೇಳಿದ್ದಾರೆ. ಪ್ರೇಮ ನಮ್ಮ ವಿಕಸನವನ್ನು ನಮ್ಮ ಮಾನಸಿಕ ಹಾಗೂ ವೈಚಾರಿಕ ಪ್ರಪಂಚವನ್ನು ವಿಸ್ತಾರಗೊಳಿಸುತ್ತದೆ. ಸ್ವಾರ್ಥ ನಮ್ಮ ಅಹಂ ಹೆಚ್ಚಿಸಿ ನಮ್ಮ ಏಕಾಂಗಿತನವನ್ನು ಪುಷ್ಟೀಕರಿಸಿ ಎಲ್ಲರಿಂದ ಅವಹೇಳನಕ್ಕೆ ಒಳಗಾಗುವ ಸನ್ನಿವೇಶಕ್ಕೆ ದಾರಿಮಾಡಿಕೊಡುತ್ತದೆ. ಸ್ವಾಮಿ ವಿವೇಕಾನಂದರು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಬೋಧಿಸಿದ ವಿಷಯಗಳಲ್ಲಿ ಇದು ಕೂಡ ಒಂದು.ಪ್ರೇಮವೇ ನಮ್ಮ ವಿಕಸನಕ್ಕೆ ಕಾರಣ ಎಂದಲ್ಲ ಆದರೆ ಪ್ರೇಮವಿಲ್ಲದ ವಿಕಸನ ಮುಂದೆ ಆಪತ್ತಿನ ಕಟ್ಟಿಟ್ಟ ಬುತ್ತಿ ಎಂಬ ಪರಿವೆ ನಮ್ಮಲ್ಲಿ ಇರಬೇಕಾಗಿದೆ. ಸ್ವಾರ್ಥ ಎನ್ನುವಂತದ್ದು ವ್ಯಕ್ತಿ ಬಯಸದೆ ಬರುವಂತಹ ಒಂದು ವ್ಯಕ್ತಿತ್ವ. 'ನನ್ನಲ್ಲಿ ಸಾಧ್ಯವಿದೆ' ಅಥವಾ 'ನನ್ನಿಂದ ಮಾತ್ರ ಸಾಧ್ಯವಿದೆ' ಎಂಬ ಧೈರ್ಯ ಯಾವಾಗ ವ್ಯಕ್ತಿಯ ಹೃದಯವನ್ನು ಹೊಕ್ಕಿ ಸ್ಥಾನ ಪಡೆಯುತ್ತದೆಯೋ ಆಗ ತನ್ನಿಂದ ತಾನಾಗಿ ಸ್ವಾರ್ಥ ಆವರಿಸಿಕೊಂಡುಬಿಡುತ್ತದೆ. 1893 ಸೆಪ್ಟೆಂಬರ್ 11 ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೊದಲ್ಲಿ ಸರ್ವಧರ್ಮ ಸಭೆಯಲ್ಲಿ ಭಾಷಣ ಮಾಡಿದ ದಿನ. ಅಂದು ಕೂಡ ನನ್ನ ಸಹೋದರ ಸಹೋದರಿಯರೇ ಎಂಬ ಹಾಗೆ ಸಂಬೋಧನೆ ಯನ್ನು ಮಾಡುವುದರ ಮೂಲಕ ತಮ್ಮ ಪ್ರೀತಿಯ ಅಗಾಧತೆಯನ್ನು ತೋರ್ಪಡಿಸಿದ ಆದರ್ಶ ವ್ಯಕ್ತಿ ವಿವೇಕಾನಂದರು. ತಮ್ಮ ಮಾತಿನ ಪ್ರತಿಯೊಂದು ಅಕ್ಷರಕ್ಕೂ ತಮ್ಮ ಜೀವನದ ಆದರ್ಶಗಳನ್ನು ತೋರ್ಪಡಿಸಿ ಬೀಳ್ಕೊಟ್ಟವರು ಸ್ವಾಮಿವಿವೇಕಾನಂದರು. ವಿಕಿಪೀಡಿಯದಲ್ಲಿ ಪ್ರೀತಿ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ "ಪ್ರೀತಿ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ" ಇಂದು ಮೂಡಿಬರುತ್ತದೆ ಇದರಲ್ಲಿ ನಾಲ್ಕು ವಿಧ ಸಾಕಷ್ಟು ಹಿನ್ನೆಲೆ ಇದೆ. ಆದರೆ ಸ್ವಾರ್ಥ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ, ಸ್ವಾರ್ಥ ಪದ ಬಳಸಿರುವ ಲೇಖನಗಳ ವಿವರ ಬರುತ್ತದೆ ವಿನಹ ಯಾವುದೇ ರಿಸಲ್ಟ್ ಬರುವುದಿಲ್ಲ ಯಾಕೆಂದರೆ ಸ್ವಾರ್ಥಕ್ಕೆ ವಿಕಿಪೀಡಿಯದಲ್ಲಿಯೂ ಕೂಡ ಸ್ಥಾನ ಇಲ್ಲ, ಎಂಬ ಹಾಗೆ ವ್ಯಂಗ್ಯವಾಡಬಹುದು.
 ನಮ್ಮ ಜೀವನದ ಲಕ್ಷ್ಯವನ್ನು ಸೇರಲು ಒಂದಷ್ಟು ಮಿತಿಯೊಳಗೆ ಇರಬೇಕಾದ್ದು ಸತ್ಯ. ಯಾಕೆಂದರೆ ಎಲ್ಲರನ್ನೂ ಪ್ರೀತಿಸುತ್ತ ಎಲ್ಲರ ಕಾಳಜಿ ಧ್ಯೇಯವಾಗಿಸುತ್ತ ಮುಂದುವರಿದರೆ ನಮ್ಮ ಜೀವನವನ್ನು ಆಕಾರಕ್ಕೆ ತರಲು ಸಾಧ್ಯವಿಲ್ಲ ಎಂಬುದು ಕೂಡ ನೆನಪಿರಬೇಕು. ಸ್ವಾರ್ಥ ಎನ್ನುವಂತಹದ್ದು ಕೇವಲ ತನ್ನದು, ತನಗೆ ಮಾತ್ರ, ನಾನು ಮಾತ್ರ ಮಾಡಬಲ್ಲೆ, ಎಲ್ಲದಕ್ಕೂ ನಾನೇ ನಾನೇ ದೊಡ್ಡವ ಎಂಬ ಅಹಂಭಾವ ಮಾತ್ರವಲ್ಲ, ನನ್ನ ಕೆಲಸವನ್ನು ನಾನೇ ಮಾಡುತ್ತೇನೆ, ನನ್ನ ಖರ್ಚನ್ನು ನಾನೇ ನಿಭಾಯಿಸುತ್ತೇನೆ, ಎಲ್ಲರ ಕಷ್ಟಗಳಿಗೆ ನಾನೇ ಓಗೊಡುತ್ತೇನೆ. ಎನ್ನುವ ವಿಷಯಗಳು ಕೂಡಾ ಸೇರುತ್ತದೆ.ಇದು ಒಬ್ಬ ವ್ಯಕ್ತಿಯ ಜೀವನದ ಧನಾತ್ಮಕ ಅಂಶಗಳಲ್ಲಿ ಸೇರಬಹುದಾದ ಸ್ವಾರ್ಥಗಳು.  ಹಾಗೆಯೇ 'ಪ್ರೀತಿ' ಅದು ವಾತ್ಸಲ್ಯ ಎಂಬ ಮಿತಿಗೂ ಮೀರಿ, ಗೆಳೆತನ ಎಂಬ ಚೌಕಟ್ಟಿನ ಬೇಲಿ ದಾಟಿ, ಹುಡುಗ ಮತ್ತು ಹುಡುಗಿಯ ನಡುವಿನ ವ್ಯತ್ಯಸ್ತ ದೃಷ್ಟಿಯ ಪ್ರೀತಿಯಾಗಿ ಬದಲಾಗಿ, ಪಾಲಕರ ತಲೆನೋವಿಗೆ ಕಾರಣವಾಗ ಬಾರದು ಎಂಬುದು ಕೂಡ ನೆನಪಿನಲ್ಲಿ ಇರಬೇಕಾದದ್ದೇ ಆಗಿದೆ. ಅಂತಹ ಪ್ರೀತಿಗೆ ಬೆಲೆ ಇಲ್ಲ. ಯಾಕೆಂದರೆ ಅದು ಮಾನವ ಜೀವಿಯ ಸೌಹಾರ್ದ ಮನೋಭಾವವನ್ನು ಬದಲಿಸಿ ಕೇವಲ ದೈಹಿಕ ಅಥವಾ ವ್ಯಕ್ತಿತ್ವ ಪ್ರೀತಿಯ ವಿಷಯಗಳಿಗೆ ಆಸ್ಪದ ನೀಡುವ ಭಾವನೆಯಾಗಿ ಪ್ರೀತಿಯನ್ನು ನಿರ್ವಚಿಸಿ ಬಿಡುತ್ತದೆ.
ಅತಿಯಾದರೆ ಅಮೃತವೂ ವಿಷವೇ ಸಾಧಾರಣ ಎಲ್ಲರೂ ಕೇಳಿರುವಂತಹ ಮಾತು ಇದು ಇಲ್ಲಿಯೂ ಕೂಡ ಸ್ಥಾನ ಸಮಯೋಗ್ಯ ಎನಿಸುತ್ತದೆ. ಪ್ರಾಧ್ಯಾಪಕರೊಬ್ಬರು ಹೇಳಿಕೊಟ್ಟ ಉಪಮೆ, "ಚಿನ್ನ ಭೂಗರ್ಭದಿಂದ ದೊರೆತರು ಅದಕ್ಕೆ ಲೇಪನ ಕೊಟ್ಟಾಗ ಮಾತ್ರ ಅದುಅಪರಂಜಿ ಆಗುತ್ತದೆ", ಅಪರಂಜಿಗೆ ಹೆಚ್ಚಿನ ಬೆಲೆ. ಆದ್ದರಿಂದ ಚಿನ್ನದಂತಹ ಜೀವನಕ್ಕೆ ಪ್ರೀತಿಯೆಂಬ ಲೇಪನವನ್ನು ಕೊಟ್ಟು ಅಪರಂಜಿಯಾಗಿಸೋಣ ಜೀವನದ ಬೆಲೆ ಹೆಚ್ಚಾದೀತು.. ಕೊನೆಯದಾಗಿ ಮುಂದಿನ ಶಕ್ತಿ ಎಂದು ಕರೆಯಲ್ಪಡುವ ಯುವಜನತೆಯಲ್ಲಿ ವಿನಂತಿ ಏನೆಂದರೆ "ಪ್ರೀತಿ" ಎಂದು ಸಂಬೋಧಿಸುವುದರಲ್ಲಿ ಆಕ್ಷೇಪ ಇಲ್ಲ, ಆದರೆ ಅದು ವಾತ್ಸಲ್ಯದ ಮಿತಿ ಮೀರದಿರಲಿ. "ಸ್ವಾರ್ಥ" ಬೇಡವೇ ಬೇಡ ಎಂದು ಹೇಳುತ್ತಿಲ್ಲ, ಆದರೆ ಅದು ಕಟ್ಟೆ ಮೀರಿ ತುಳುಕದಿರಲಿ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

You may like these posts

  •            ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರು…
  •  ಸ್ವಾರ್ಥಿಗಳ ಸಂತೆಯಲ್ಲಿಮೋಸ ವಂಚನೆಗಳಿಗೆ ಮಿತಿ ಇಲ್ಲ. ಸ್ನೇಹ ಪ್ರೀತಿಗಳಿಗಂತೂ ಬೆಲೆಯಿಲ್ಲ.  ಈ ರೀತಿ ನಿರಾಶಾವಾದಿಗಳಾದ ಕವಿಗಳು ಹೇಳುವುದು ಇದುವೇ ಸ್ವಾರ್ಥ ಮಿತಿ ಮೀರದಿರಲಿ ಪ್ರೀತಿ ತಿನಾಗೇ ಉದಯಿಸೀತು…

10 comments

  1. second ago
    Sir send me please more information about this subject
  2. second ago
    Very Good...Nice
  3. second ago
    Sir send me please more information about this subject
  4. second ago
    Sir send me please more information about this subject
  5. second ago
    Sir send me please more information about this subject
  6. second ago
    Plz
  7. ಅಭಿಷೇಕ್ ಅಡೂರು
    This comment has been removed by the author.
  8. ಅಭಿಷೇಕ್ ಅಡೂರು
    This comment has been removed by the author.
  9. second ago
    ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಮೊದಲಾಗಿ ಕ್ಷಮೆ ಯಾಚಿಸುತ್ತೇನೆ. ಈ ಕುರಿತ ವಿವರಣಾತ್ಮಕ ಲೇಖನ ಬರೆಯಬೇಕೆಂದು ಯೋಚಿಸುತ್ತಿದ್ದೇನೆ. ಇದು ಒಂದು ಸ್ಪರ್ಧೆಯ ನಿಮಿತ್ತ ಬರೆದ ಪ್ರಬಂಧ ಆದುದರಿಂದ ಸಧ್ಯ ಇಷ್ಟರಲ್ಲೇ ನಿಲ್ಲಿಸುತ್ತಿದ್ದೇನೆ......

    ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.....
  10. second ago
    ತುಂಬಾ ಚೆನ್ನಾಗಿದೆ.....