"ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ",
ಎಂಬ
ಬಸವಣ್ಣನವರ ವಚನವು ಭಾವಾರ್ಥದ
ಮುಖಾಂತರ ಅಜಗಜಾಂತರ ದೊಡ್ಡ
ಅರ್ಥವನ್ನು ವಿವರಿಸುತ್ತದಾದರೂ,
ಮೊಬೈಲ್
ಫೋನ್ ಇಂದು ಜನಮನದಾಳದಲ್ಲಿ
ಹಾಸುಹೊಕ್ಕಾಗಿರುವ 'ಜಂಗಮ
ಯಂತ್ರ'
ಈ
ನುಡಿಯನ್ನು ಸಾರಿ ಹೇಳುವಂತಿದೆ.
ತಂತ್ರಜ್ಞಾನೀಕೃತವಾದ
ಕಂಪ್ಯೂಟರ್ ಎಂದೇ ಕರೆಯಲ್ಪಡುವ
ಈ ಕಲಿಯುಗದಲ್ಲಿ ಯುವಜನಾಂಗವು ಚಲನ ವಾಣಿಯ ಸೆಳೆಗೆ ಸೆಳೆದು ಅದರ
ದಾಸರಾಗಿ ದುಷ್ಕೃತ್ಯಗಳಿಗೆ
ಸಾಕ್ಷಿಯಾಗುವುದು ದುರಾದೃಷ್ಟಕರ.
ಮೊದಲು
ಚಲನ ವಾಣಿ ಎಂದರೇನು ?ಇತಿಹಾಸವೇನು?
ಮೂಲ
ಉಪಯೋಗವೇನೆಂದು,
ಮೆಲುಕು
ಹಾಕಿದರೆ,
ಅಲೆಕ್ಸಾಂಡರ್
ಗ್ರಾಮ್ ಬೆಲ್ ಮತ್ತು ಮೊದಲು ಕಂಡು
ಹಿಡಿದ ವಯರುಗಳ ಮೂಲಕ ಶಬ್ದ
ತರಂಗಗಳನ್ನು ಸಾಗಿಸುವ ರೀತಿಯನ್ನು
ಬಳಸಿ ಸಂಪರ್ಕ ಸೃಷ್ಟಿಸುವ ಯಂತ್ರವೇ
ಫೋನ್ ಅಥವಾ ಲ್ಯಾಂಡ್ ಫೋನ್.
ನವಯುಗದ
ತಂತ್ರಜ್ಞಾನದ ಸೇರ್ಪಡೆಯೊಂದಿಗೆ
ಹಾಗೂ ಐಸಿ ಚಿಪ್,
ಡಯೋಡ್
ಮುಂತಾದ ನವ ಜೋಡಣೆಯೊಂದಿಗೆ ಗಾತ್ರ
ಕಿರಿದಾಗಿಸಿ ಮುಂದೆ ವಯರ್
ಮುಕ್ತ ಗೊಳಿಸಿದರು.
ಪತ್ರಗಳ
ಮೂಲಕ ವಾರಗಟ್ಟಲೆ ತಗಲುವ ಮಾಹಿತಿ
ವಿನಿಮಯ ರೀತಿಯಿಂದ ಪ್ರತ್ಯೇಕಿಸಲ್ಪಟ್ಟು
ತಕ್ಷಣದಲ್ಲಿ ಮಾಹಿತಿ ವಿನಿಮಯಕ್ಕೆ
ಶಬ್ದವಿದ್ಯೆ ಉಪಯೋಗಿಸಲ್ಪಟ್ಟಿತು.
ಗ್ರಾಮ್
ಬೆಲ್ ಕರೆ ಮಾಡುವುದಕ್ಕೆ ಮಾತ್ರ
ಫೋನ್ ತಯಾರಿಸಿದ.
ನವಯುಗದ
ವಿಜ್ಞಾನಿಗಳು ಜನಸಾಮಾನ್ಯರಿಗೆ
ಎಲ್ಲರಿಗೂ ಉಪಯೋಗವಾಗಲಿ ಎಂದು
ಅಲಾರಾಂ,
ಸಮಯ,
ಮೆಸೇಜ್
ಸೇರಿಸಿದರು.
ನವ
ಟ್ರೆಂಡ್ಗಳು ಅತಿಯಾದಾಗ ಕೆಮರಾ,
ವಾಟ್ಸಾಪ್,
ಫೇಸ್
ಬುಕ್ ಸೇರಿ ಇಂಟರ್ನೆಟ್ ವ್ಯವಸ್ಥೆ
ಮಿತಿ ಮೀರಿ ಬೆಳೆಯಿತು.
ಮೊದಲು
ಬಟನ್ ಪೋನ್ಗಳಾಗಿ ಇದ್ದು,
ಮುಂದೆ
ಟಚ್ ಸ್ಕ್ರೀನ್ ಫೋನ್ ಗಳಾದವು.
ಹಿಂದೆ
ಸಣ್ಣದಾಗುತ್ತಾ ಬಂದು ಇದೀಗ
ದೊಡ್ಡದಾಗುತ್ತಾ ಹೋಗುತ್ತಿದೆ.
ನವಯುಗದ
ಯುವಕ ಯುವತಿಯರ ಟ್ರೆಂಡ್ ಸ್ಟೈಲ್
ಗಳು ನವ ಯುಗದ ಪೀಳಿಗೆಗಳ ಗುಣನಡತೆ
ಗಳ ಮೇಲೆ ಗಾಢ ಪರಿಣಾಮ ಬೀರುತ್ತಿದೆ.
ನವ
ಜನತೆಯ ಅತಿಯಾದ ಸೆಲ್ಫಿ,
ವಾಟ್ಸಪ್
ಚಾಟಿಂಗ್ ಮುಂತಾದವು ಯುವ ಜನತೆಯ
ಭಾಗವಹಿಸುವ,
ಮಾತನಾಡುವ
ಅಥವಾ ಇತರರೊಂದಿಗೆ ಬೆರೆಯುವ
ಗೋಜಿಗೆ ಹೋಗುವುದಿಲ್ಲ ಮಕ್ಕಳಿಂದ
ಹಿಡಿದು ಹಿರಿಯರೂ ಈ ಫೋನಿಗೆ
ಮರುಳಾಗುತ್ತಿದ್ದಾರೆ.
ಜನರ
ಅತಿಯಾದ ಉಪಯೋಗವು ಈ ಕ್ಷೇತ್ರದಲ್ಲಿ
ಅತಿಯಾದ ಅವಕಾಶಗಳನ್ನು ಸೃಷ್ಟಿಸುವುದು
ಆದರೂ ನವ ಜನತೆಯ ಮನಸ್ಸು ಏಕಾಂಗಿತನವನ್ನು
ಆಗ್ರಹಿಸುತ್ತಾ ಸ್ವಾರ್ಥ
ಹೆಚ್ಚಾಗುತ್ತಿದೆ.
ಮದುವೆ
ಸಮಾರಂಭಗಳಲ್ಲಿ ಮೊಬೈಲ್ ಫೋನ್
ಒಂದಿಗೆ ದೂರ ದೂರದವರೊಡನೆ ಮಾತಿನ
ಚಟಾಕಿ ಹಾರಿಸುವ ಜಾಯಮಾನ ಹೆಚ್ಚಾಗಿದೆ.
ಜನರೆಲ್ಲರೂ
ಮಾನಸಿಕ ರೋಗಿಗಳು ಆಗುವ ಕಾಲ
ದೂರವಿಲ್ಲ ಎಂಬ ಸಂದೇಹ ಜನ ಮಾನಸದಲ್ಲಿ
ಮೂಡಿದೆ.
ಅದು
ಅತಿರೇಕವೆನಿಸುವುದಿಲ್ಲ.
ಚಲನ
ವಾಣಿ ಇಂದಿನ ಕಾಲದ ತಂತ್ರಜ್ಞಾನ
ಅಧಿಕವಾಗಿ ಬೆಳೆಸುತ್ತಾ ಇರುವ
ಕಾಲದಲ್ಲಿ ಅಂತರ್ಜಾಲ ಬಳಕೆ
ಉಪಯೋಗಕರವೂ ಹೌದು.
ಆನ್ಲೈನ್
ಬುಕಿಂಗಳು,
ಏರೋಪ್ಲೇನ್,
ಟ್ರೈನ್,
ಹೋಟೆಲ್
ಮುಂತಾದ ಕ್ಷೇತ್ರದಲ್ಲಿ ಅತಿಯಾದ
ಬಳಕೆಯ ಮೂಲಕ ಜನರಲ್ಲಿ ನವ ಟ್ರೆಂಡ್
ಗಳನ್ನು ಪರಿಚಯಿಸುತ್ತದೆ.
ಬ್ಯಾಂಕಿಂಗ್
ಕ್ಷೇತ್ರದಲ್ಲಿ ಮೊಬೈಲ್ ಬ್ಯಾಂಕಿಂಗ್
ಉಪಯೋಗವಾಗುತ್ತಿದೆ.
ಮೊಬೈಲ್
ಫೋನಿನ ಬಳಕೆ ರೀತಿ ಅರಿತು ತಪ್ಪು
ದಾರಿ ಹಿಡಿಯದಿದ್ದರೆ ಚಲನ ವಾಣಿ
ಬಹಳಷ್ಟು ಉಪಕಾರಿ.
ಮೊಬೈಲ್
ಫೋನ್ ನ ದುರುಪಯೋಗ ಅಥವಾ ಅಪಾಯ
ಮಾನವ ಸಮುದಾಯವನ್ನು ಕಳ್ಳತನ,
ಮೌಡ್ಯತೆ
ಸಂಬಂಧಗಳ ಅರಿವು ಇಲ್ಲದಿರುವಿಕೆ,
ಏಕಾಂಗಿತನ
ಆಗ್ರಹ ಮುಂತಾದ ದುಷ್ಕೃತ್ಯಗಳಿಗೆ
ದಾಸರಾಗುವಂತೆ ಮಾಡುವುದು.
ಯುವ
ಜನತೆಯನ್ನು ಈ ಕೆಟ್ಟ ದೃಷ್ಟಿಯಿಂದ
ದೂರವಾಗಿಸಲು ಯುವಕ ಯುವತಿಯರನ್ನು
ಕುಟುಂಬ,
ಅಧ್ಯಾಪಕರು
ಮತ್ತು ಸಮಾಜ ತಮ್ಮ ಜಾಗೃತ ಕಣ್ಣುಗಳಿಂದ
ಕಾಯ್ದು ಎಚ್ಚರಿಸಬೇಕಾದ ಅಗತ್ಯವಿದೆ.
ಯುವ
ಟ್ರೆಂಡ್ ಗಳು ಸ್ಟೈಲ್ ಗಳು ಯುವ
ಜನತೆಯ ದಾರಿ ತಪ್ಪುವಂತೆ ಮಾಡುವುದು
ಖಂಡಿತ.
ಕುಟುಂಬವು
ಮಕ್ಕಳ ಪ್ರೌಢಿಮೆ ಅರಿತು ವಯಸ್ಸಿಗೆ
ತಕ್ಕಂತೆ ಮೊಬೈಲ್ ಫೋನ್ ಖರೀದಿಸಿ
ಕೊಡುವ ಅಗತ್ಯವಿದೆ.
ನವೋದಯವು
ನವ ಯುವ ಜನತೆಯ ಸುಸಂಸ್ಕೃತಿಯ
ಬಿತ್ತರಿಸು ವಿಕೆಯ ಮೂಲಕ ಮುಂದಿನ
ಜಾಗೃತ ಜನಜೀವನ ಉಂಟಾಗಿ ಮುಂದಿನ
ಯುಗ ಉಜ್ವಲವಾಗಲಿ ಎಂದು ಆಶಿಸುವ.
ಆದರೆ
ಆಸೆಗಳಿಗೆ ಎಲ್ಲೆ ಇರಲಿ.
ಅದರ
ಅಮಿತವು ಮುಂದಿನ ಜನಜೀವನ ಉಳಿಸಲು
ಸಾಧ್ಯವಿಲ್ಲ.
ಆಗ
ಈಗಿನ ಜನಾಂಗದ ಮುಂಜಾಗ್ರತೆಯ
ಅವಶ್ಯಕತೆ ಮನದಟ್ಟಾಗುವುದು.
ಸುಸಂಸ್ಕೃತ ಭಾರತಕ್ಕೆ.....
ಸುಸಂಸ್ಕೃತ ಯುವಜನತೆ ಇರಲಿ......